ಡಾ. ಕೆ. ತಿಮ್ಮಯ್ಯ ಭಾರತೀಯ ಕನ್ನಡ ಲೇಖಕ, ವಿಮರ್ಶಕ ಮತ್ತು ಸಂಶೋಧಕ. ಇವರು ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. == ಜನನ, ವಿದ್ಯಾಭ್ಯಾಸ == ತಿಮ್ಮಯ್ಯ ಅವರು ೧೯೬೯ರಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೋಕಿನ ಚಿಕ್ಕಬಾಣಗೆರೆಯಲ್ಲಿ ಈರಕಾಳಪ್ಪ ಮತ್ತು ಈರನಾಗಮ್ಮ ಅವರ ಮಗನಾಗಿ ಹುಟ್ಟಿದರು. ಶಾಲಾಶಿಕ್ಷಣವನ್ನು ಚಿಕ್ಕಬಾಣಗೆರೆ, ಹುಲಿಕುಂಟೆಯಲ್ಲಿ; ಪದವಿ ಶಿಕ್ಷಣವನ್ನು ಶಿರಾದಲ್ಲಿ; ಕನ್ನಡ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದ ಅವರು, ಪಿಎಚ್. ಡಿ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. == ಕೃತಿಗಳು == === ಸಂಶೋಧನೆ === ಜೀವಸಂಕುಲ ಜಾನಪದ ನೊಸರಿ ಚಿಕ್ಕಬಾಣಗೆರೆ ಕರಿಯಮ್ಮ ಕಾಡು ಕುಸುಮ === ವಿಮರ್ಶೆ === ಬೆಳಸು ಕೊನರು ಹೃದಯ ಸ್ಪಂದನ ‌ === ಕಥಾಸಂಕಲನ === ಉಗಾದಿ ಸಾಲು ಹುಣಸೆ === ಜಾನಪದ === ಉಲಾಯ ಕವಣೆ === ಪಶುಪಾಲನ ಸಂಸ್ಕೃತಿ ಅಧ್ಯಯನ === ನೊಸರಿ === ಇತರರೊಡನೆ ತಂದಿರುವ ಕವನ ಸಂಕಲನ === ಬಣ್ಣದ ಗೆರೆ ಸಂಪಾದಕೀಯ: ಬಯಲು ಆಲಯ ಹರಿಗೋಲು ಗ್ರಾಮೀಣಾಭಿವೃದ್ದಿಯ ಸವಾಲುಗಳು ಹೂವಿನಿಂದ ನಾರು ಕೃಷ್ಣಾರ್ಜುನ == ಗೌರವ ಪುರಸ್ಕಾರ == ನೊಸರಿ ಮತ್ತು ಚಿಕ್ಕಬಾಣಗೆರೆ ಕರಿಯಮ್ಮ ಕೃತಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರೋತ್ಸಾಹ ಧನ ಸಾಹಿತ್ಯ ಕೇಸರಿ ಪ್ರಶಸ್ತಿ == ಉಲ್ಲೇಖ ==